ಹನೂರು ಪೋಷಕರು ನಿಮ್ಮ ಮೇಲೆ ಎಷ್ಟರ ಮಟ್ಟಿಗೆ ನಿರೀಕ್ಷೆ ಇಟ್ಟಿದ್ದಾರೆವೋ, ಅಷ್ಟೇ ಮಟ್ಟಿಗೆ ಜನತೆ ನನ್ನ ಮೇಲೂ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ ಎಂದು ವಿದ್ಯಾರ್ಥಿಗಳಲ್ಲಿ ಶಾಸಕ ಮಂಜುನಾಥ್ ಹೇಳಿದರು. ಹನೂರು ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಾಸಕರು ಮಾತನಾಡಿದರು. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಉತ್ತಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ಪೋಷಕರು ನಿಮ್ಮ ಭವಿಷ್ಯಕ್ಕಾಗಿ ಕನಸು ಕಾಣುತ್ತಿದ್ದಾರೆ. ಈ ನಿರೀಕ್ಷೆಗೆ ನೀವು ತಕ್ಕ ಮಟ್ಟಿಗೆ ಓದುತ್ತಿದ್ದೀರಾ ಎಂಬುದನ್ನು ಆಲೋಚಿಸಬೇಕು ಎಂದರು ಹಾಗಯೆ ನಮ್ಮ ಹನೂರು ಕ್ಷೇತ್ರವು ಭೌಗೋಳಿಕವಾಗಿ ದೊಡ್ಡದು, ಹಾಗು ಇಲ್ಲಿ ಹಲವಾರು ಸವಾಲುಗಳಿವೆ.ಎಂದರು