ನಗರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎರಡು ಬೈಕ್ ಗಳ ಮಧ್ಯೆ ಈ ಅಪಘಾತ ನಡೆದಿದೆ. ಹೌದು.. ಗದಗ ನಗರದ ಕೆ ಸಿ ರಾಣಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಕೆಸಿ ರಾಣಿ ರಸ್ತೆಯಿಂದ ಬರುತ್ತಿದ್ದ ಬೈಕಿಗೆ ಅದೇ ಮಾರ್ಗವಾಗಿ ಅಡ್ಡಲಾಗಿ ಬಂದ ಇನ್ನೊಂದು ಬೈಕ್ ರಭಸವಾಗಿ ಗುದ್ದಿದೆ. ಪರಿಣಾಮ ಬೈಕ್ ಮುಂಭಾಗ ಸಂಪೂರ್ಣ ನುಚ್ಚುಗುಜ್ಜಾಗಿದೆ. ಇನ್ನೂ ಓರ್ವ ಬೈಕ್ ಸವಾರನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.