ಗಂಗಾವತಿ ನಗರದಲ್ಲಿರುವ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರ್ಮನ್ ಒಬ್ಬರು ಕಾಲೇಜಿನ ವಿದ್ಯಾರ್ಥಿನಿಯ ಪೋಷಕರ ಬಳಿ ಇರುವ ಬಂಗಾರದ ಆಭರಣಗಳು ಜೊತೆಗೆ ತಾಯಿಯ ಕತ್ತಲಿರೋ ತಾಳಿಯನ್ನು ಅಡ ಇಟ್ಟುಕೊಂಡು ಬೆಳಕಿಗೆ ಬಂದಿದೆ. ಕಾಲೇಜಿನ ಫೀಸ್ ಕಟ್ಟಲಾಗದ ವಿದ್ಯಾರ್ಥಿನಿಯೊಬ್ಬಳು ಮರಳಿ ತನ್ನ ಶಾಲಾ ದಾಖಲಾತಿಯನ್ನು ವಾಪಸ್ ಕೇಳಿದ್ದಕ್ಕೆ ನಾಲ್ಕು ವರ್ಷದ ಫೀಸ್ ಕಟ್ಟಿ ದಾಖಲಾತಿ ಪಡೆದುಕೊಂಡು ಹೋಗುವಂತೆ ಒತ್ತಾಯ ಮಾಡಿದ್ದಾರೆ ಹಣ ನೀಡಲು ತಮ್ಮ ಬಳಿ ಹಣ ಇಲ್ಲ ಎಂದಾಗ, ತಾಯಿಯ ತಾಳಿ ಹಾಗೂ ಒಡವೆಗಳನ್ನ ಇಟ್ಟಕೊಂಡಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ...