ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಜಿ.ಎಸ್.ಮಧುಸೂಧನ್ ಮಂಗಳವಾರ ವಾಪಾಸ್ ಪಡೆದಿದ್ದಾರೆ. ಕೊಳ್ಳೇಗಾಲ ಉಪ ವಿಭಾಗ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರನ್ನು ಭೇಟಿಯಾಗಿ ಆ.18 ರಂದು ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಅಂಗೀಕಾರಕ್ಕೆ 10 ದಿನ ಅವಕಾಶವಿತ್ತು. ಆದರೆ, ಶಾಸಕ ಗಣೇಶ್ ಪ್ರಸಾದ್ ಸೂಚನೆ ಮೇರೆಗೆ ಎಂಟೇ ದಿನಕ್ಕೆ ರಾಜೀನಾಮೆ ವಾಪಾಸ್ ಪಡೆದಿದ್ದಾರೆ. ಮಧುಸೂದನ್ ರಾಜೀನಾಮೆ ವಾಪಾಸ್ ಪಡೆದಿರುವುದರಿಂದ ಪುರಸಭೆ ರಾಜಕೀಯ ಗರಿಗೆದರಿದೆ