ಸಪ್ಟೆಂಬರ್ 5 ರಾತ್ರಿ 8:00 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ ಮಿಕ್ಸ್ಚರ್ ನಲ್ಲಿ ಹಾನಿಕಾರಕ ಕೃತಕ ಬಣ್ಣ ಬಳಕೆ ಮಾಡಲಾಗಿದೆ. ಆಹಾರ ಮತ್ತು ಸಂರಕ್ಷಣಾ ಇಲಾಖೆ ಸಂಗ್ರಹಿಸಿದ ಹಲವು ಮಾದರಿ ಪ್ರಕಾರ ಕೃತಕ ಬಣ್ಣ ಬಳಕೆ ಆಗಿರುವುದು ಬಹುತೇಕ ಖಚಿತ ಆಗಿದೆ. ಹಳದಿ ಬಣ್ಣ ಕಾಣಿಸಲು ಕೃತಕ ಬಣ್ಣ ಬಳಕೆ ಆಗಿರುವ ಶಂಕೆ ಇದೆ. ಸಂಗ್ರಹಿಸಿದ ಮಾದರಿಗಳು ಕೂಡ ಅದನ್ನೇ ಹೇಳುತ್ತಿದೆ. ಸದ್ಯದಲ್ಲಿ ಆರೋಗ್ಯ ಇಲಾಖೆ ಕೈಗೆ ಈ ರಿಪೋರ್ಟ್ ಸೇರಲಿದ್ದು ಬ್ಯಾನ್ ಪಟ್ಟಿಗೆ ಮಿಕ್ಸ್ಚರ್ ಸೇರುವ ಸಾಧ್ಯತೆ ಇದೆ.