ಖಗ್ರಾಸ್ ಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶ್ರೀ ತ್ರಿಕೂಟೇಶ್ವರ ದೇವಸ್ಥಾನ ಹಾಗೂ ಸೂರ್ಯನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ಗ್ರಹಣದ ವೇಳೆ ದೇವಸ್ಥಾನದಲ್ಲಿ ಭಕ್ತರಿಗೆ ಅವಕಾಶ. ಆದರೆ, ದೇವಸ್ಥಾನದ ಆವರಣದಲ್ಲಿ ದೇವರ ನಾಮ ಸ್ಮರಣೆಗೆ ಅವಕಾಶ. ಗ್ರಹಣ ಮುಕ್ತಾಯದ ನಂತರ ಜಲಾಭಿಷೇಕ ಪಂಚಾಮೃತ ಅಭಿಷೇಕ,ಗ್ರಹಣದ ವೇಳೆ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಿರಂತರ ಜಲಾಭಿಷೇಕ ಅಂತ ದೇವಸ್ಥಾನದ ಅರ್ಚಕ ರಮೇಶ ಪೂಜಾರ ಹೇಳಿಕೆ.