ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಮೂಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಯ ಕುಮದ್ವತಿ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಬಂದಿದ್ದ ಐವರ ಗುಂಪನ್ನು ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರ ಪತ್ತೆಗೆ ಬಲೇ ಬೀಸಲಾಗಿದೆ. ಆರೋಪಿಗಳಿಂದ ನಾಡ ಬಂದೂಕು, ಮದ್ದು ಗುಂಡು ಹಾಗೂ ಆಲ್ಟೋ ಕಾರನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನ ಬಟ್ಟೆ ಮಲ್ಲಪ್ಪ ಗ್ರಾಮದ ವಿಶ್ವನಾಥ, ಬಳಸಗೋಡು ಗ್ರಾಮದ ಚನ್ನವೀರ ಮೂರ್ತಿ ಹಾಗೂ ಹಾಲೇಶ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಈ ಘಟನೆ ಮಂಗಳವಾರ ನಡೆದಿದ್ದು ಗುರುವಾರ ಪ್ರಕಟಣೆ ಮೂಲಕ ಅಧಿಕಾರಿಗಳು ತಿಳಿಸಿರುತ್ತಾರೆ