ನಗರದಲ್ಲಿ ಹೆಚ್ಚಿದ ಮಾದಕ ವಸ್ತು ಮಾರಾಟ 30 ಸಾವಿರ ಮೌಲ್ಯದ ಹೆರಾಯಿನ್ ಜಪ್ತಿ ಆರೋಪಿ ಬಂಧನ. ಬೆಳಗಾವಿಯ ಸಮರ್ಥ ನಗರದಲ್ಲಿ ವಿನಾಯಕ ರಾಮಾ ಚಾರಟಕರ ಎಂಬ ಆರೋಪಿಯನ್ನು ಬುಧವಾರ ಶಹಾಪೂರ ಠಾಣೆ ಪೊಲೀಸರು ಬಂಧಿಸಿದ್ದು. ಆತನಿಂದ 30 ಸಾವಿರ ಮೌಲ್ಯದ 15.98 ಗ್ರಾಂ ಹೆರಾಯಿನ್ ಸೆರಿದಂತೆ ಆತನ ಬೈಕ್ ಮತ್ತು ಮೊಬೈಲ್ ನ್ನು ವಶಪಡಿಸಿಕೊಂಡು ಆತನ ವಿರುದ್ದ ಕಾನೂನು ಕ್ರಮ ಜರುಗಿಸಿದ್ದಾರೆ. ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ