ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಬಸವಪಟ್ಟಣ ಗ್ರಾಮದ ಬಳಿ ಜೈನ ತೀರ್ಥಂಕರರಾದ ಭಗವಾನ್ ಶ್ರೀ ಆದಿನಾಥ ಜಿ ಮತ್ತು ಭಗವಾನ್ ಶ್ರೀ ನೇಮಿನಾಥ ಜಿ ಅವರ ವಿಗ್ರಹಗಳು ಪತ್ತೆಯಾಗಿದ್ದು, ಗೌತಮ್ ಜೈನ್ ಮತ್ತು ತಂಡ ಪುನರುಜ್ಜೀವನಗೊಳಿಸಿದ್ದಾರೆ. ಗ್ರಾಮದ ಹಲಸಿದಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ವಿಗ್ರಹಗಳು ಅನೇಕ ವರ್ಷಗಳ ಹಿಂದೆಯೇ ಪತ್ತೆಯಾಗಿದ್ದವು. ಆದರೆ ಕೆಲವರು ವಿಗ್ರಹಗಳನ್ನು ತೆಗೆದು ಪುನರುಜ್ಜೀವನಗೊಳಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಗೌತಮ್ ಜೈಮ್ ಮತ್ತು ತಂಡಲ್ಲಿ ಮಾಹಿತಿ ಸಿಕ್ಕ ಕೂಡಲೇ ಹಾಳವಾಗಿ ಹೂತು ಹೋಗಿದ್ದ ವಿಗ್ರಹಗಳನ್ನು ಹೊರ ತೆಗೆದು, ಜಮೀನು ಮಾಲೀಕ ಹಲಸಿದ್ದಪ್ಪ ನೀಡಿದ ಭೂಮಿಯಲ್ಲಿ ಚಿಕ್ಕದಾದ ದೇವಾಲಯ ನಿರ್ಮಿಸಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ.