ಯಾದಗಿರಿ ಜಿಲ್ಲೆಯ ಸುರಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಭೂಮಿ ಮಂಜೂರಾತಿಗಾಗಿ ನಡೆಯುತ್ತಿರುವ ಧರಣಿಯ ವೇದಿಕೆಯಲ್ಲಿ ವಿಶೇಷವಾಗಿ ಶಿಕ್ಷಕರ ದಿನವನ್ನು ಆಚರಿಸಲಾಗಿದೆ. ಶುಕ್ರವಾರ ಸಂಜೆ ಹೋರಾಟದ ಅನೇಕ ಮುಖಂಡರು ಭಾಗವಹಿಸಿ ಮೊದಲ ಮಹಿಳಾ ಶಿಕ್ಷಕಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಿದ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗುವ ಮೂಲಕ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ, ಮಾನಪ್ಪ ಕರಡಕಲ್, ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ವೆಂಕಟೇಶ ಹೊಸಮನಿ, ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂದಗೇರಿ, ರಾಹುಲ್ ಹುಲಿಮನಿ, ಮಾಳಪ್ಪ ಕಿರದಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.