ರಾಯಚೂರು ನಗರದಲ್ಲಿ ಐದನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮ 18 ಗಂಟೆಗಳ ಕಾಲ ನಡೆದಿದ್ದು ಇದರಿಂದಾಗಿ ಗಣೇಶ ವಿಸರ್ಜನೆಗೆ ಬಂದಿದ್ದವರು ಕಾಯುವಂತಹ ಸ್ಥಿತಿಯು ಕೂಡ ಕಂಡು ಬಂದಿದೆ. ಭಾನುವಾರ ರಾತ್ರಿ 9:00 ಗಂಟೆಯಿಂದ ಆರಂಭಗೊಂಡು ಸೋಮವಾರ ಮಧ್ಯಾನದ ವರೆಗೂ ಗಣೇಶ್ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಗಣೇಶ ಸಮಿತಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತುಂಬಾ ಸಮಯವೂ ಕೂಡ ವಿಳಂಬ ಉಂಟು ಮಾಡಿದ್ದರಿಂದ ವಾಹನಗಳಲ್ಲಿ ಗಣೇಶ ಮೂರ್ತಿಗಳನ್ನು ಯುವಕರು ಮತ್ತು ಸಮಿತಿ ಸದಸ್ಯರು ಧ್ವನಿವರ್ಧಕಗಳ ತಾಳಕ್ಕೆ ಕೊನೆಗೂ ಸಂಭ್ರಮಿಸಿದ್ದು ಇದರಿಂದಾಗಿ ವಿಸರ್ಜನೆಗೆ ಮತ್ತಷ್ಟು ವಿಳಂಬ ಕಂಡು ಬಂದಿದೆ.