ಬದುಕಿದ್ದ ಮಗುವನ್ನು ಸಾವನ್ನಪ್ಪಿದೆ ಎಂದು ಹೇಳಿ ಹಣ ಕೇಳಿದ್ದ ಆಸ್ಪತ್ರೆ ವಿರುದ್ದ ಸಂಬಂಧಿಕರು ಕಿಡಿ ಕಾರಿದ್ದಾರೆ.ಮೈಸೂರಿನ ಬೃಂದಾವನ ಆಸ್ಪತ್ರೆ ಸಿಬ್ಬಂದಿ ವಿರುದ್ದ ಕಿಡಿ ಕಾರಿದ್ದಾರೆ.ಒಂದು ಲಕ್ಷದ ಎಂಬತ್ತು ಸಾವಿರ ಹಣ ಕಟ್ಟುವಂತೆ ಹೇಳಿದ್ದರು. ಮಗು ಮೃತಪಟ್ಟಿದೆ ಶವ ಕೊಡಲು ಹಣ ಕಟ್ಟಿ ಎಂದ ಆಸ್ಪತ್ರೆ ಆಡಳಿತ ಮಂಡಳಿ ಹೇಳಿತ್ತು. ಹಣವಿಲ್ಲದೆ ಬಡ ಕುಟುಂಬ.ತಮ್ಮ ಗ್ರಾಮದಲ್ಲಿ ಭಿಕ್ಷೆ ಬೇಡಿ ಹಣ ತಂದಿದ್ದಾರೆ. ಮನೆ ಮನೆ ಬಾಗಿಲಿಗೆ ಹೋಗಿ ಮಗುವಿನ ದೊಡ್ಡಮ್ಮ ಮಂಗಳಮ್ಮ ಬಿಕ್ಷೆ ಬೇಡಿ ಹಣ ಸಂಗ್ರಹಿಸಿದ್ದರು.ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮಗು ಬದುಕಿದೆ ಉಸಿರಾಡಾಡುತ್ತಿದೆ ಎಂದ ವೈದ್ಯರು ಮಾಹಿತಿ ನೀಡಿದ್ದಾರೆ.ಇದರ ನಡುವೆ 25 ಸಾವಿರ ಹಣ ಕಟ್ಟಿಸಿಕೊಂಡಿದ್ದಾರೆ ಕೊನೆಗೂ ಬದುಕುಳಿಯದ ಮಗು.