ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದ ಕೇರಳದ ಉದ್ಯಮಿಯೋರ್ವ ಕರ್ನಾಟಕಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಸಮೀಪ ನಡೆದಿದೆ. ಕೇರಳದ ಸುಲ್ತಾನ್ ಬತ್ತೇರಿ ನಿವಾಸಿ ಬಾಬಿ ಸೆಬಾಸ್ಟಿಯನ್(47) ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ. ಬಾಬಿಯು ಸುಲ್ತಾನ್ ಬತ್ತೇರಿಯಲ್ಲಿ 2 ರೆಸಾರ್ಟ್ ಹಾಗೂ ಬಟ್ಟೆ ಅಂಗಡಿಗಳನ್ನು ಹೊಂದಿದ್ದು, ಕೆಲವು ವರ್ಷಗಳಿಂದ ಬ್ಯುಸಿನೆಸ್ ನಲ್ಲಿ ಭಾರೀ ನಷ್ಟ ಉಂಟಾಗಿ ಖಿನ್ನತೆ ಗೆ ಒಳಗಾಗಿದ್ದರು. ಸಾಲಭಾದೆಗೆ ಮನನೊಂದು ಬಾಬಿ ಸೆಬಾಸ್ಟಿಯನ್ ಕಾರಿನಲ್ಲಿ ಕರ್ನಾಟಕಕ್ಕೆ ಬಂದು ದೇವರಹಳ್ಳಿ ಸಮೀಪದ ಜಮೀನೊಂದರ ಹುಣಸೆಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.