ಕೆಲದಿನಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಯಲ್ಲಿನ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಈ ವಿಷಯ ತಿಳಿದ ಬೆಳಗಾವಿಯ ಸೈಕಲ್ ಭೀಷ್ಮ ಎಂದು ಖ್ಯಾತಿ ಪಡೆದ ರಮೇಶ್ ಪೂಜಾರಿಯವರು ಬೆಳಗಾವಿಯಿಂದ ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆತಾಳು ಶಾಲೆಗೆ ಸುಮಾರು 400 ಕಿಲೋ.ಮೀಟರ್ ಸೈಕಲ್ ಪ್ರಯಾಣ ಕೈಗೊಂಡು ಶುಕ್ರವಾರ ಆಗಮಿಸಿದರು.