ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಗೊಲ್ಲನಕಟ್ಟೆ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಈ ಊರಿನಲ್ಲಿ ಚಿಕನ್ ಗುನ್ಯಾ ರೋಗಕ್ಕೆ ಸಾರ್ವಜನಿಕರು ಅಕ್ಷರಶಃ ನಲುಗಿ ಹೋಗಿದ್ದಾರೆ. ಜ್ವರ, ಕೀಲು ನೋವು, ಕೆಮ್ಮು, ನೆಗಡಿ, ತಲೆ ನೋವು ಅಂತ ಈಡೀ ಊರಿಗೆ ಊರೇ ಹಾಸಿಗೆ ಹಿಡಿದು ಮಲಗಿದೆ. ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು, 850 ಕ್ಕೂ ಹೆಚ್ಚು ಜನ ಸಂಖ್ಯೆ ಇದೆ. ಇಂಥ ಊರಿನ ಪ್ರತಿ ಮನೆಯಲ್ಲೂ ಇಬ್ಬರಿಗಿಂತ ಹೆಚ್ಚು ಮಂದಿ ಚಿಕನ್ ಗುನ್ಯಾ ರೋಗಕ್ಕೆ ತುತ್ತಾಗಿದ್ದಾರೆ. ಇದರಿಂದ ರೋಗಿಗಳು ಕೀಲು ನೋವುಗಳಿಂದ ಓಡಾಡಲೂ ಕಷ್ಟ ಎನ್ನುವ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಇನ್ನೂ ಗ್ರಾಮಕ್ಕೆ ಸಾರಿಗೆ ಸೌಕರ್ಯ ಕೂಡಾ ಇಲ್ಲದೇ, ಜನರು ಬೇರೆ ಕಡೆ ಆಸ್ಪತ್ರೆಗಳಿಗೆ ಹೋಗಲು ಕೂಡಾ ಹರಸಾಹಸ ಪಡುವಂತ ಸ್ಥಿತಿಯಲ್ಲಿದ್ದಾರೆ