ಬೆಳಗಾವಿ ಜಿಲ್ಲೆಯಾದ್ಯಂತ ಈ ವರ್ಷ ವಾಡಿಕೆಗಿಂತಲೂ ಅಧಿಕ ಪ್ರಮಾಣ ಮಳೆ ಆಗಿದೆ.ಪ್ರವಾಹ ಸಂತ್ರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿ ಪರಿಹಾರ ಘೋಷಿಸಬೇಕು ಎಂದು ಇಂದು ಶನಿವಾರ 11 ಗಂಟೆಗೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಆಗ್ರಹಿಸಿದರು ಜಿಲ್ಲೆಯಾದ್ಯಂತ ಈ ವರ್ಷ ವಾಡಿಕೆಗಿಂತಲೂ ಅಧಿಕ ಪ್ರಮಾಣ ಮಳೆ ಆಗಿದೆ. ವಾಡಿಕೆಯಂತೆ 443 ಮಿ.ಮೀ ಮಳೆ ಆಗಬೇಕಿತ್ತು ಆದರೆ ಈ ವರ್ಷ 553 ಮಿಮೀ ಮಳೆ ಆಗಿದೆ. 115 ಮಿ.ಮೀ ಮಳೆ ಹೆಚ್ಚಾದ ಪರಿಣಾಮ ಬೆಳೆ,ಪ್ರಾಣ,ಆಸ್ತಿ ಹಾನಿ ಆಗಿವೆ.ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆಯ ಕಾರಣಕ್ಕೆ ಕೃಷ್ಣಾ,ಘಟಪ್ರಭಾ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಇದೆ ಜಿಲ್ಲೆಯ 43 ಸೇತುವೆ ಸಂಪರ್ಕ ಕಳೆದುಕೊಂಡಿವೆ. ಬೆಳೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ ಎಂದರು.