ನಗರದ ಗಾಂಧಿವನದಲ್ಲಿ ಮೆಘಾಸ್ಟಾರ್ ಚಿರಂಜೀವಿ ಅವರ ಭಾವಚಿತ್ರದ ಮುಂದೆ ಅವರ ಅಭಿಮಾನಿಗಳ ಬಳಗದಿಂದ ಶುಕ್ರವಾರ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಬಳಗದ ಸದಸ್ಯರಲ್ಲಿ ಒಬ್ಬರಾದ ಮುಖಂಡ ಕೆ.ಚಂದ್ರಾರೆಡ್ಡಿ ಮಾತನಾಡಿ, ಚಿತ್ರಪ್ರೇಮಿಗಳ ಹೃದಯ ಗೆದ್ದಿರುವ ಚಿರಂಜೀವಿ ಅವರಿಗೆ ಉತ್ತಮ ಆರೋಗ್ಯ ಸಿಗಲಿ, ಅವರು ಮತ್ತಷ್ಟು ಚಿತ್ರಗಳನ್ನು ಕಲಾರಸಿಕರಿಗೆ ನೀಡುವಂತಾಗಲಿ ಎಂದು ಹಾರೈಸಿದರು.ತಮ್ಮ ನೂರಾರು ಚಲನಚಿತ್ರಗಳಲ್ಲಿನ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ಚಿರಂಜೀವಿ ಅವರ ಮತ್ತಷ್ಟು ಚಿತ್ರಗಳು ತೆರೆಗೆಬರಲಿ ಎಂದು ಆಶಿಸಿದ ಅಭಿಮಾನಿಗಳು, ಅವರಿಗೆ ಜೈಕಾರ ಕೂಗಿದರು. ಚಿರಂಜೀವಿ ಸರಳ ಸಜ್ಜನಿಕೆಗೆ ಹೆಸರಾದವರಾಗಿದ್ದಾರೆ ಎಂದ್ರು