ಮಗಳ ಮದುವೆಗೆ ಸಾಲ ಮಾಡಿದ್ದ ಆಟೋ ಚಾಲಕನೋರ್ವ ಕಿಲ್ಲಾ ಕೆರೆಗೆ ಹಾರಿ ಆತ್ಮಹತ್ಯೆ. ಮಗಳ ಮದುವೆಗೆ ಸಾಲ ಮಾಡಿದ್ದ ಆಟೋ ಚಾಲಕನೋರ್ವ ಕಿಲ್ಲಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಬೆಳಗಾವಿ ತಾಲೂಕಿನ ಬಿ.ಕೆ.ಕಂಗ್ರಾಳಿಯ ಕಿರಣ್ ಮನಗುತ್ತಕರ್( 54) ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ ಎಂದು ತಿಳಿದು ಬಂದಿದೆ. ಕಳೆದ ಒಂದು ವರ್ಷದ ಹಿಂದೆ ಮಗಳ ಮದುವೆ ಮಾಡಿದ್ದ ಕಿರಣ್ ಕಳೆದ ನಾಲೈದು ದಿನದಿಂದ ಮನೆಗೆ ಹೋಗಿರಲಿಲ್ಲ. ಆಟೋವನ್ನು ನಿಲ್ದಾಣದಲ್ಲಿ ನಿಲ್ಲಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ