ಯತ್ನಾಳ್ ಬಿ ಎಸ್ ವೈ ಲಿಂಗಾಯತರೇ ಅಲ್ಲ ಎಂದು ತಿಳಿಸಿದ್ದಾರೆ, ಇದನ್ನ ಯಾರು ಸ್ಪಷ್ಟಪಡಿಸಬೇಕು ಬಿ ವೈ ಆರ್ ವೀರಶೈವ ಮಹಾಸಭದ ನಿರ್ದೇಶಕರಾಗಿದ್ದಾರೆ. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯಿತ ಎಂದು ಬರಸಬೇಕಾ ಇಲ್ಲ ಹಿಂದೂ ಅಂತ ಬರುತ್ತಿರ ಸ್ಪಷ್ಟಪಡಿಸಿ ಎಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ. ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯತ್ನಾಳ್ ಹೇಳಿದಂತೆ ನೀವು ವೀರಶೈವ ಲಿಂಗಾಯಿತ ಅಲ್ಲವಾದರೆ ಏನು ಎಂಬುದನ್ನು ದಾಖಲೆ ಮೂಲಕ ತಿಳಿಸಿ ಎಂದು ಒತ್ತಾಯಿಸಿದರು.