ದೇಶದಾದ್ಯಂತ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲೂ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಸ್ಲಿಂ ಭಾಂಧವರು ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನ ಆಚರಣೆ ಮಾಡಿದರು. ನಗರದ ವಿವಿಧ ಬಡಾವಣೆಯಲ್ಲಿ ಮುಸ್ಲಿಂ ಭಾವುಟಗಳನ್ನ ಕಟ್ಟಿಕೊಂಡು, ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರು. ಅಲ್ಲದೆ ನಗರ ವ್ಯಾಪ್ತಿಯಲ್ಲಿನ ಬಡ ಮಾಕಾನ್ ಸೇರಿದಂತೆ ಹಲವು ಮಸೀದಿಗಳಲ್ಲಿ ನೂರಾರು ಮಂದಿ ಮುಸ್ಲಿಂ ಸಮುದಾಯದ ಜನರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ನಗರದ ಗಾಂಧಿ ವೃತ್ತ, ಬಿಡಿ ರಸ್ತೆ, ಹೊಳಲ್ಕೆರೆ ರಸ್ತೆ ಸೇರಿ ಹಲವು ಕಡೆ ಮೆರವಣಿಗೆ ನಡೆಸುವ ಮೂಲಕ ಸಡಗರದಿಂದ ಈದ್ ಮಿಲಾದ್ ಆಚರಣೆ ಮಾಡಿದರು