ದಾಂಡೇಲಿ : ಎಸ್‌ಐಟಿ ತನಿಖೆಯ ನೆಪದಲ್ಲಿ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳ ಹಾಗೂ ದುಷ್ಟಶಕ್ತಿಗಳ ಷಡ್ಯಂತ್ರಗಳ ವಿರುದ್ಧ ಬಿಜೆಪಿ ಮಂಡಳದ ವತಿಯಿಂದ ಇಂದು ಸೋಮವಾರ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ನಗರದ ಸೋಮಾನಿ ವೃತ್ತದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಳದ ಅಧ್ಯಕ್ಷ ಬುದವಂತಗೌಡ ಪಾಟೀಲ್, ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷರಾದ ರೋಷನ್ ನೇತ್ರಾವಳಿ ಮತ್ತು ಸುಧಾಕರ ರೆಡ್ಡಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರವಿ ಗಾಂವಕರ ಅವರು ಮಾತನಾಡಿದರು.