ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಎರಡು ದೇವಸ್ಥಾನಗಳಲ್ಲಿ ಕಳ್ಳತನ ನಡೆದಿದ್ದು, ಇದರ ವಿರುದ್ಧ ರೈತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಸೋಮವಾರ ತಡರಾತ್ರಿ ಅಜ್ಜೀಪುರ - ಹನೂರು ಮಾರ್ಗದಲ್ಲಿರುವ ಶ್ರೀ ಕಣಿವೆ ಆಂಜನೇಯ ಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿದ್ದಾರೆ. ಇದೇ ತರಹ, ಸುಮಾರು 15 ದಿನಗಳ ಹಿಂದೆ ದೊಡ್ಡಲತ್ತೂರು ಗ್ರಾಮದ ಮಾರಮ್ಮನ ದೇವಾಲಯದಲ್ಲಿಯೂ ಕಳ್ಳತನ ನಡೆದಿತ್ತು. ಆದರೆ ಈವರೆಗೂ ಯಾವುದೇ ಆರೋಪಿಗಳ ಪತ್ತೆವಾಗಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.ಇದೆಲ್ಲವೊಂದೆ ಕಡೆ, ರೈತರ ಜಮೀನಿನಲ್ಲಿ ಕೇಬಲ್ ಕಳುವು, ಮೇಕೆಗಳ ಕಳವು ಕೂಡಾಮ ನೆಡೆದಿದೆ ಎನ್ನಲಾಗಿದೆ ಇದ್ದರಿಂದ ಗ್ರಾಮೀಣ ಜನರು ಭೀತಿಯಿಂದಿದ್ದಾರೆ.