ಅಮೇಜಾನ್ ಡಿಸ್ಟ್ರಿಬ್ಯೂಟರ್ ಬಿಸಿನೆಸ್‌ಗೆ ಹಣ ತೊಡಗಿಸುವಂತೆ ನಂಬಿಸಿ ವಕೀಲರೊಬ್ಬರಿಂದ ಸುಮಾರು 2ಲಕ್ಷಕ್ಕೂ ಅಧಿಕ ಹಣವನ್ನು ಹಾಕಿಸಿಕೊಂಡು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಾಣೇಬೆನ್ನೂರ ಈಶ್ವರನಗರದ ಚಿಕ್ಕರಾಜ ಓಂಕಾರಪ್ಪ ಬೆನ್ನೂರು ಎಂಬುವವರೇ ಮೋಸ ಹೋಗಿರುವ ವಕೀಲರಾಗಿದ್ದಾರೆ. ಅಮೇಜಾನ್ ಡಿಸ್ಟ್ರಿಬ್ಯೂಟರ್ ಎಂದು ಪರಿಚಯಗೊಂಡ ವೈಷ್ಣವಿ ಶರ್ಮ ಹಾಗೂ ಅಮೆಜಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪುರುಷೋತ್ತಮ ಗುಜ್ಜರ ಎಂಬುವವರ ವಿರುದ್ದ ದೂರು ದಾಖಲಿಸಲಾಗಿದೆ. ಮೊದಲನೆ ಆರೋಪಿ ವೈಷ್ಣವಿ ಶರ್ಮ ದೂರುದಾರರಿಗೆ ಕರೆ ಮಾಡಿ ಅಮೇಜಾನ್ ಡಿಸ್ಟ್ರಿಬ್ಯೂಟರ್ ಬಿಸಿನೆಸ್‌ಗೆ ಹಣ ತೊಡಗಿಸಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ.