ಕಲಬುರಗಿ : ಕಲಬುರಗಿ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು, ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ ಬಳಿ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.. ಇದೇ ವೇಳೆ ದತ್ತಾತ್ರೇಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ದರ್ಶನಕ್ಕೂ ಮುನ್ನ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಆದರೆ ಪುಣ್ಯಸ್ನಾನ ಮಾಡೋ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದೇ ಇರೋದ್ರಿಂದ ಭಕ್ತರು ಅಪಾಯದ ನದಿಯಲ್ಲೆ ಸ್ನಾನ ಮಾಡ್ತಿದ್ದಾರೆ. ಪುಣ್ಯಸ್ನಾನ ಮಾಡೋ ಸ್ಥಳದಲ್ಲಿ ದೇವಸ್ಥಾನ ಆಡಳಿತ ಮಂಡಳಿಯು ಸುರಕ್ಷತಾ ಕ್ರಮಗಳನ್ನ ಕೈಗೊಂಡಿಲ್ಲವೆಂದು ಭಕ್ತರು ಆ28 ರಂದು ಮಧ್ಯಾನ 1 ಗಂಟೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.