ಮಂಡ್ಯದಿಂದ ಕೆ.ಎಂ.ದೊಡ್ಡಿಗೆ ಕೆಎಸ್'ಆರ್'ಟಿಸಿ ಬಸ್'ನಲ್ಲಿ ಆಗಮಿಸಿದ ಮಹಿಳೆಯ 40 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ತಡವಾಗಿ ವರದಿಯಾಗಿದೆ. ಗೋಪಾಲಪುರದ ಎ.ಎಸ್.ವಿದ್ಯಾ ಕೋಂ ಅನಿಕೇತನ ಜಿ.ಸಿ ಚಿನ್ನಾಭರಣ ಕಳೆದುಕೊಂಡವರು. ಮಂಡ್ಯದಿಂದ ತವರು ಮನೆ ಅಣ್ಣೂರಿಗೆ ತೆರಳುವಾಗ ಕೆ.ಎಂ.ದೊಡ್ಡಿ ಸರ್ಕಾರಿ ಅಸ್ಪತ್ರೆ ಬಳಿ ಇಳಿದುಕೊಂಡು ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ. 16.3 ಗ್ರಾಂ ತೂಕದ ಚಿನ್ನದ ಬಳಿ, 9.18 ಗ್ರಾಂ ತೂಕದ ಚಿನ್ನದ ಚೈನ್, 4.16 ಗ್ರಾಂ ತೂಕದ ಚಿನ್ನದ ಓಲೆ ಹಾಗೂ ಉಂಗುರ, ಜುಮಿಕಿ ಸೇರಿದಂತೆ ರೂ.2,22,000 ಮೌಲ್ಯದ 40 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಎಲ್ಲ ಕಡೆ ಹುಡುಕಿ ವಿಚಾರಿಸಲಾಗಿ ಎಲ್ಲಿಯೂ ಸಿಕ್ಕಿಲ್ಲ ಎಂದು ದೂರು ನೀಡಲಾಗಿದೆ.