ಯಾದಗಿರಿ ನಗರದ ಮೆಕ್ಯಾನಿಕ್ ಮತ್ತು ಮಾಲೀಕರ ಸಂಘದ ಕಚೇರಿ ಆವರಣದಲ್ಲಿ ಬುಧವಾರ ಮಧ್ಯಾಹ್ನ ಮೆಕ್ಯಾನಿಕ್ ಮತ್ತು ಮಾಲೀಕರ ಜಿಲ್ಲಾಮಟ್ಟದ ಜಾಗೃತಿ ಸಭೆ ನಡೆಸಲಾಯಿತು. ಸವಿಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಮಾತನಾಡಿ, ಈ ಹಿಂದೆ ಮೆಕ್ಯಾನಿಕ್ ಮತ್ತು ಮಾಲೀಕರ ಸಂಘದಿಂದ ಶಾಸಕರಿಗೆ ಮತ್ತು ಸಚಿವರಿಗೆ ಯಾದಗಿರಿಯಲ್ಲಿ ಆಟೋ ನಗರ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿತ್ತು ಬೇಡಿಕೆ ಈಡೇರಿಸಿಲ್ಲ ಆದ್ದರಿಂದ ಕೂಡಲೇ ಆಟೋ ನಗರ ಘೋಷಣೆ ಮಾಡಬೇಕು ಇಲ್ಲದಿದ್ದಲ್ಲಿ ಮತ್ತೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ಮೆಕ್ಯಾನಿಕ್ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.