ಮಣ್ಣಗುಡ್ಡಯಲ್ಲಿರುವ ದ.ಕ. ಜಿಲ್ಲಾ ಕ್ರೀಡಾ ಬಾಲಕ ಮತ್ತು ಬಾಲಕಿಯರ ವಸತಿಗೃಹಕ್ಕೆ ಮಂಗಳೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್ ಹಾಗು ಪೊಲೀಸ್ ನಿರೀಕ್ಷಕಿಯರಾದ ಭಾರತಿ ಜಿ, ರವಿ ಪವಾರ್ ನೇತೃತ್ವದ ತಂಡವು ಶುಕ್ರವಾರ ದಾಳಿ ನಡೆಸಿದ್ದಾರೆ. ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಸಾಕಷ್ಟು ಲೋಪದೋಷಗಳು ಕಂಡುಬಂದಿದೆ. ಮುಖ್ಯವಾಗಿ ವಸತಿಗೃಹದ ಅಡುಗೆ ಕೋಣೆಯಲ್ಲಿ ಶುಚಿತ್ವ ಇರಲಿಲ್ಲ. ಧವಸಧಾನ್ಯಗಳ ಸ್ಟಾಕ್ ಇರಲಿಲ್ಲ. ಅಕ್ಕಿಯಲ್ಲಿ ಹುಳುಗಳು ಕಂಡುಬಂದಿದೆ. ಸ್ಟಾಕ್ ರಿಜಿಸ್ಟರ್ ಕೂಡ ಇರಲಿಲ್ಲ. ಅಡುಗೆಗೆ ಕಡಿಮೆ ಗುಣಮಟ್ಟದ ಹೆಚ್ಚು ಪ್ಯಾಟ್ ಇರುವ ಪಾಮೋಲಿನ್ ಅಡುಗೆ ಎಣ್ಣೆಯನ್ನು ಬಳಸುವುದು ಕಂಡುಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.