ಗುಂಡ್ಲುಪೇಟೆ ತಾಲ್ಲೂಕಿನ ಯಣಗುಂಬ ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವೊಂದರ ಪ್ರತ್ಯಕ್ಷಗೊಂಡು ಭಯದ ವಾತವಾರಣ ನಿರ್ಮಾಣ ಮಾಡಿದೆ ಕೂಡಲೆ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರು ಸರ್ಪವನ್ನು ನೋಡಿ ತಕ್ಷಣ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಸ್ವಾಮಿರವರು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ ಹೆಬ್ಬಾವು ಅಪಾಯಕಾರಿಯಾದ ಉರಗವಾಗಿದ್ದು, ಯಾವುದೇ ವ್ಯಕ್ತಿಗೆ ಹಾನಿ ಸಂಭವಿಸಿಲ್ಲ. ಈ ಸಂಬಂಧವಾಗಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ತಜ್ಞರು ಮಾಹಿತಿ ನೀಡಿದ್ದಾರೆ. ಆ ನಂತರ ಹೆಬ್ಬಾವನ್ನು ನೈಸರ್ಗಿಕ ವಾಸಸ್ಥಳದತ್ತ ಬಿಟ್ಟಿದ್ದಾರೆ.