ಹನೂರು:ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಹಳೆಯೂರುಸಮೀಪ ಹೋಗುವ ರಸ್ತೆಯಲ್ಲಿ ನಭಾರ್ಡ್ ಅನುಧಾನದಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಅವರು ಮಾತನಾಡಿಈ ಭಾಗದಲ್ಲಿ ಹೈನುಗಾರಿಕೆ ಪ್ರಮುಖ ವೃತ್ತಿಯಾಗಿದ್ದು, ದನ, ಕರು, ಕುರಿ, ಮೇಕೆ ಸೇರಿದಂತೆ ಸಾಕುಪ್ರಾಣಿಗಳ ಸಾಕಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯ ಅವಶ್ಯಕತೆ ಬಹಳ ಕಾಲದಿಂದ ಇದ್ದು. ಇದೀಗ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ಇದರಿಂದ ಸ್ಥಳೀಯ ರೈತರಿಗೆ ಹಾಗೂ ಹೈನುಗಾರಿಕೆ ಅವಲಂಬಿತ ಜನತೆಗೆ ನೆರವಾಗಲಿದೆ ಎಂದರು