ನಗರದ ಕನಕದಾಸ ಬಡಾವಣೆಯ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸ್ ನಲ್ಲಿ ಅದ್ದೂರಿಯಾಗಿ ಒಂಬತ್ತನೇ ದಿನದ ಗಣೇಶನ ವಿಸರ್ಜನೆ ಮಾಡಲಾಯಿತು. ವಿಶೇಷ ಪೂಜೆ ಸಲ್ಲಿಸುವ ಮೂಲಕ ನಗರದ ಕನಕದಾಸ ಬಡಾವಣೆಯಲ್ಲಿ, ವಿದ್ಯಾರ್ಥಿಗಳ ಒಡಗೂಡಿ ಶಿಕ್ಷಕರು ಮೆರವಣಿಗೆ ಮಾಡುವ ಮೂಲಕ ಗಣೇಶನ ವಿಸರ್ಜನೆ ಮಾಡಿದರು. ಈ ಸಂದರ್ಭದಲ್ಲಿ ಸಾರವಾಡದ ಗೊಂಬೆಗಳ ಕುಣಿತ ಮನಮೋಹಕವಾಗಿತ್ತು. ಗೊಂಬೆಗಳ ನೃತ್ಯ ಕಂಡು ವಿದ್ಯಾರ್ಥಿಗಳು ಸಂತಸ ಪಟ್ಟರು...