ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರ ರಾಜ್ಯ ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಮೈಸೂರಿನಲ್ಲಿ ಹೇಳಿಕೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನಾಳೆ ಸಂಜೆಯೊಳಗೆ ಸ್ಪಷ್ಟನೆ ಕೊಡಬೇಕು. ಚಾಮುಂಡಿಬೆಟ್ಟ ಹಿಂದೂಗಳಿಗೆ ಸೇರಿದ್ದೋ ಅಲ್ಲವೋ ಎಂದು ನಾಳೆ ಸಂಜೆಯೊಳಗೆ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ. ಸಿದ್ದರಾಮಯ್ಯ ಸುತ್ತಮುತ್ತ ಇರುವ ಡೋಂಗಿಗಳನ್ನು ಮೆಚ್ಚಿಸುವ ಸಲುವಾಗಿ ದಸರಾ ಉದ್ಘಾಟನೆ ಮಾಡಲು ಬಾನುಮುಷ್ತಾಕ್ ರನ್ನು ಆಯ್ಕೆ ಮಾಡಿದ್ದೀರಾ? ಇಡೀ ದಸರಾ ಧಾರ್ಮಿಕ ಪರಂಪರೆಗೆ ಅನುಸಾರವಾಗಿ ನಡೆಯುತ್ತದೆ. ನಮಗೆ ಬಾನು ಮುಷ್ತಾಕ್ ಮೇಲೆ ದ್ವೇಷವಿಲ್ಲ. ಆದರೆ ಬಾನುಮುಷ್ತಾಕ್ ಅರಿಶಿನ ಕುಂಕುಮದ ಬಣ್ಣವನ್ನು ಟೀಕೆ ಮಾಡಿದ್ದಾರೆ.