*ವೈಭವದಿಂದ ಜರುಗಿದ ಬುಡಕಟ್ಟು ಸಂಸ್ಕೃತಿಯ ನೆಲೆಯ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ* ಚಿತ್ರದುರ್ಗ:-ಕಣ್ಣು ಹಾಯಿಸಿದಷ್ಟೂ ದೂರ ಭಕ್ತ ಸಾಗರ,ಉಘೇ, ಉಘೇ ಮಾರಮ್ಮ ಎಂಬ ಘೋಷಣೆ ಕೂಗುತ್ತಾ ಕಲ್ಲಿನಕಂಬ ಹತ್ತಿ ದೀಪ ಹಚ್ಚುತ್ತಿದ್ದಂತೆಯೇ ಮುಗಿಲುಮುಟ್ಟಿದ ಭಕ್ತರ ಜಯಘೋಷ,ದೇವರನ್ನು ದರ್ಶಿಸಲು ಸಾಗರೋಪದಿಯಲ್ಲಿ ಸಾಲುಗಟ್ಟಿ ನಿಂತ ಭಕ್ತ ವೃಂದ, ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗಡಿಗ್ರಾಮವಾದ ಗೌರಸಮುದ್ರದ ತುಂಬಲು ಪ್ರದೇಶದಲ್ಲಿ ಮಂಗಳವಾರ ಜರುಗಿದ ಮಾರಮ್ಮದೇವಿ ಜಾತ್ರೆಯಲ್ಲಿ.