ತುಮಕೂರಿನ ರಿಂಗ್ ರಸ್ತೆಯಲ್ಲಿರುವ 2 ಎಕರೆ ಭೂಮಿ ಕಾಂಗ್ರೆಸ್ ಭವನ ಟ್ರಸ್ಟ್ ಗೆ ಕಾನೂನು ಪ್ರಕಾರವೇ ನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿಯಾಗಿದೆ ಎಂದು ಬಿಜೆಪಿ ನಾಯಕರ ಆರೋಪವನ್ನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ ತಳ್ಳಿ ಹಾಕಿದರು. ತುಮಕೂರಿನ ತಾತ್ಕಾಲಿಕ ಕಾಂಗ್ರೆಸ್ ಭವನ ಕಚೇರಿಯಲ್ಲಿ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಧ್ಯಾಹ್ನ. 12.30 ರ ಸಮಯದಲ್ಲಿ ಮಾತನಾಡಿದರು.ಕಾಂಗ್ರೆಸ್ ಭವನ ಟ್ರಸ್ಟ್ ಗೆ ಎರಡು ಎಕರೆ ಜಮೀನನ್ನ ನಂದಣಿ ಮಾಡುವ ಸಮಯದಲ್ಲಿ ನಮಗೆ ನೊಂದಣಿಗೆ 11 ಗಂಟೆ 15 ನಿಮಿಷದಲ್ಲಿ ಅವಕಾಶ ನೀಡಿದ್ದರು.ಆದರೆ ಬಿಜೆಪಿ ನಾಯಕರು ಸಬ್ ರಿಜಿಸ್ಟರ್ ಕಚೇರಿಗೆ ನುಗ್ಗಿ ಅಧಿಕಾರಿಗಳನ್ನ ದಿಗ್ಬಂದನಗೊಳಿಸಿ ಸಂಜೆ 4:00ಯವರೆಗೂ ನೋದಣಿಗೆ ಅವಕಾಶ ಕೊಡಲಿಲ್ಲ ಎಂದು ದೂರಿದರು.