ಇಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದಂತ ಟ್ರಾಕ್ಟರ್ ರಸ್ತೆಯ ಗುಂಡಿಗೆ ಸಿಲುಕಿ ಪಲ್ಟಿ ಯಾಗಿರುವ ಘಟನೆ ನಡೆದಿದೆ. ಸಾತನೂರು ಸರ್ಕಲ್ ಬಳಿ ಮಂಗಳವಾರ ಅವಘಡ ನಡೆದಿದೆ. ಸಾತನೂರು ಕಡೆಗೆ ಟ್ರಾಕ್ಟರ್ ನಲ್ಲಿ ಇಟ್ಟಿಗೆಗಳನ್ನ ಸಾಗಾಟ ಮಾಡಲಾಗುತ್ತಿತ್ತು. ರಸ್ತೆಯಲ್ಲಿದ್ದ ಗುಂಡಿ ತುಂಬ ನೀರು ತುಂಬಿಕೊಂಡಿದ್ದ ಪರಿಣಾಮ ರಸ್ತೆಯ ಗುಂಡಿ ಕಾಣದೆ ಟ್ರ್ಯಾಕ್ಟರ್ ಬಿಟ್ಟ ಹಿನ್ನೆಲೆಯಲ್ಲಿ ಟ್ರಾಕ್ಟರ್ ಒಂದು ಕಡೆಗೆ ವಾಲಿಕೊಂಡಿತ್ತು. ಇಟ್ಟಿಗೆ ಮೇಲೆ ಕುಳಿತ್ತಿದ್ದ ಇಬ್ಬರು ಕಾರ್ಮಿಕರು ಕೆಳಗೆ ಬಿದ್ದು ಗಂಭೀರ ಗಾಯಗಳಾಗಿವೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.