ದ.ಕ.ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಯನ್ನು ಒಗ್ಗೂಡಿಸಿದ ಅಪರೂಪದ ಘಟನೆ ನಡೆಯಿತು. ಹರೀಶ್-ಶಶಿಕಲಾ ದಂಪತಿಯು ಭಿನ್ನಾಭಿಪ್ರಾಯಗಳಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಮೂಲಕ ಸರಿಪಡಿಸಲು ಪ್ರಯತ್ನಿಸಿ ಗಂಡ ಹೆಂಡತಿಯ ಮಧ್ಯೆ ಸಂಧಾನ ನಡೆಸಲಾಯಿತು. ಹಾಗೇ ದಂಪತಿಯು ಮತ್ತೆ ಒಗ್ಗೂಡಿ ಸಂಸಾರ ಸಾಗಿಸಲು ಒಪ್ಪಿದ್ದರು.