ಕೇವಲ ಪ್ರಚಾರಕ್ಕಾಗಿ ನೋಟೀಸ್ ನೀಡಲು ಬಂದಿದ್ದಾರೆ ಇದೇ ವಿಚಾರದಲ್ಲಿ ರಾಜ್ಯದ ಹೈಕೋರ್ಟ್ ನಲ್ಲಿ 2024 ಜುಲೈ 18ರಂದು ನನ್ನ ಪರ ತೀರ್ಪು ಬಂದಿದೆ. ಇದೀಗ ಎದುರುದಾರರು ಸುಪ್ರೀಂ ಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸಿದ್ದು ಕಾನೂನಾತ್ಮಕವಾಗಿಯೇ ಹೋರಾಟ ನಡೆಸಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.ನ್ಯಾಯಾಲಯಕ್ಕೆ ಹಾಗೂ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು ಸುಪ್ರೀಂ ಕೋರ್ಟ್ ನಲ್ಲಿ ಕೇವಲ ಅರ್ಜಿಯನ್ನು ಪುರಸ್ಕರಿಸಿದ್ದು ಮುಂದಿನ ವಿಚಾರಣೆಗೆ ನಮ್ಮ ಪರ ವಕೀಲರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ನ್ಯಾಯಾಲಯದಲ್ಲಿ ನಮಗೆ ವಿಶ್ವಾಸವಿದ್ದು ಈ ಬಾರಿಯೂ ನಮ್ಮ ಪ್ರತಿ ತೀರ್ಪು ಬರುವ ವಿಶ್ವಾಸವಿದೆ ಎಂದು ಹೇಳಿದರು. ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದರೆ ಅದನ