ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಷಮೆಯಾಚಿಸುವ ಅವಶ್ಯಕತೆ ಇರಲಿಲ್ಲ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ತುಮಕೂರಿನಲ್ಲಿ ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದು ಸದಾ ವತ್ಸಲೆ ಅಂತ ಅಂದರೆ ಭಾರತ ಮಾತೆಗೆ ನಮಸ್ಕಾರ ಎಂದು ಅವರೇನೂ ನಮ್ಮ ಆರ್ ಎಸ್ ಎಸ್ ಮುಖ್ಯಸ್ಥರಿಗೆ ನಮಸ್ಕಾರ ಅಂದಿಲ್ಲ ಕಾಂಗ್ರೆಸ್ ನ ಗುಲಾಮರ ಮಾತು ಕೇಳಿ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ, ಇಂಡಿಯಾ ಒಕ್ಕೂಟದ ನಾಯಕರನ್ನ ಕುರಿತು ಕ್ಷಮೆಯಾಚಿಸುವ ಅವಶ್ಯಕತೆ ಇರಲಿಲ್ಲ ಎಂದು ಶಾಸಕ ಸುರೇಶ್ ಗೌಡ ಕಿಡಿಕಾರಿದರು.