ನಗರದ ಹೊರವಲಯದಲ್ಲಿರುವ ಯರಮರಸ್ ನಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಆಟೋದಲ್ಲಿ ಸಾಗಾಟ ಮಾಡುತ್ತಿರುವ ಘಟನೆ ಆಗಸ್ಟ್ 26 ರ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಪಡಿತರ ಅಕ್ಕಿಯನ್ನು ವಿವಿಧ ಗ್ರಾಮಗಳಲ್ಲಿ ಅಗ್ಗದ ದರದಲ್ಲಿ ಖರೀದಿಸಿ ಖಾಸಗಿ ಅಕ್ಕಿ ಮಿಲ್ ಗಳಿಗೆ ಮಾರಾಟ ಮಾಡಲು ತೆರಳುವಾಗ ಸಾರ್ವಜನಿಕರಿ ತಡೆದು ವಿಚಾರಿಸಿದಾಗ ಪಡಿತರ ಅಕ್ಕಿ ಅಕ್ರಮವಾಗಿ ಖರೀದಿಸಿ ಸಾಗಿಸುತ್ತಿರುವುದು ಗೊತ್ತಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.