ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಒಳಪಡುವ ಅನೇಕ ಜಾತಿಗಳಿಗೆ ಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ಮೀಸಲಾತಿ ವಾಪಾಸ್ಸು ಪಡೆದು ಸಮಗ್ರ ಅಧ್ಯಯನ ನಡೆಸಿ, ಸಾರ್ವಜನಿಕ ಚರ್ಚೆಯ ನಂತರ ಒಳಮೀಸಲಾತಿ ಹಂಚಿಕೆ ಮಾಡಬೇಕೆಂದು ಜಿಲ್ಲಾ ಬಂಜಾರ (ಲಂಬಾಣಿ) ಮುಖಂಡರು ಆಗ್ರಹಿಸಿದರು. ಗುರುವಾರ ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ನ್ಯಾ.ಸದಾಶಿವ ಆಯೋಗ ಆಧಾರಿತ ಒಳ ಮೀಸಲಾತಿಯನ್ನು ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ.04.5 ಘೋಷಿಸಿತ್ತು. ಆದರೆ, ಈಗಿನ ಸರ್ಕಾರ ಇವುಗಳ ಜೊತೆ 63 ಸಮುದಾಯಗಳನ್ನು ಪಟ್ಟಿ ಮಾಡಿ, ಶೇ.05 ಒಳ ಮೀಸಲಾತಿ ಘೋಷಿಸಿದ್ದು, ಇದಕ್ಕಿಂದ ಘೋರ ಅನ್ಯಾಯ ಬೇರೊಂದಿಲ್ಲ ಎಂದರು.