ದಸರಾ ಹಬ್ಬದ ಬಳಿಕ ಬರುವ ಹುಣ್ಣಿಮೆಯನ್ನ ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆ ಎಂದು ಹಾಗೂ ಬಯಲು ಸೀಮೆಯಲ್ಲಿ ಸೀಗೆ ಹುಣ್ಣಿಮೆ ಎಂದು ಕರೆಯುತ್ತಾರೆ. ಈ ಹುಣ್ಣಿಮೆಯ ದಿನ ಮಲೆನಾಡಿನಾದ್ಯಂತ ರೈತರು ಭೂತಾಯಿಯನ್ನ ಪೂಜೆ ಮಾಡಿ ಸಂಭ್ರಮಿಸಿ ಒಂದು ಹೆಣ್ಣಿಗೆ ಸೀಮಂತ ಮಾಡುವ ರೀತಿಯಲ್ಲಿ ಭೂತಾಯಿ ಭೂ ಕೂಡ ಪೂಜಿಸಿ ಸೀಮಂತ ಮಾಡಿ ಖುಷಿ ಪಡುತ್ತಾರೆ. ಶೃಂಗೇರಿಯಲ್ಲಿ ಭೂಮಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ರೈತರು ಪೂಜೆ ಮಾಡಿದ ದೃಶ್ಯ ವೈರಲ್ ಆಗಿದೆ.