--- ಹನೂರು,ತಾಲೂಕಿನ ಗೋಪಿನಾಥಂ ವನ್ಯಜೀವಿ ವಲಯದ ಯಾರ್ಕೆಯಂ ಹಳ್ಳದಲ್ಲಿ ಅರಣ್ಯ ಹುತಾತ್ಮ ದಿನಾಚರಣೆ ಅಂಗವಾಗಿ, ನರಹಂತಕ ಕಾಡುಗಳ್ಳ ವೀರಪ್ಪನ್‌ನಿಂದ ಮರಣ ಹೊಂದಿದ ಐಎಫ್‌ಎಸ್ ಅಧಿಕಾರಿ, ಕೀರ್ತಿಚಕ್ರ ಪುರಸ್ಕೃತ ಪಿ. ಶ್ರೀನಿವಾಸ್ ಅವರ ಸ್ಮರಣೆಯ ದಿನವನ್ನು ಅರಣ್ಯ ಇಲಾಖೆ ಗೌರವಪೂರ್ವಕವಾಗಿ ಆಚರಿಸಿತು.ಈ ಸಂದರ್ಭ, ಪಿ. ಶ್ರೀನಿವಾಸ್ ಹುತಾತ್ಮರಾದ ಸ್ಥಳದಲ್ಲಿ ಕಾವೇರಿ ವನ್ಯಜೀವಿ ವಲಯದ ಉಪ ಸಂರಕ್ಷಣಾಧಿಕಾರಿ ಸುರೇಂದ್ರ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪೂಜೆ ಸಲ್ಲಿದರು