ದಾವಣಗೆರೆ ಜಿಲ್ಲೆಯ ನಲ್ಲೂರು ಗ್ರಾಮದಲ್ಲಿ ಕೋಳಿಯೊಂದು ಬಿಳಿ ಬಣ್ಣದ ಮೊಟ್ಟೆ ಬದಲಿಗೆ ನೀಲಿ ಬಣ್ಣದ ಮೊಟ್ಟೆ ಇಟ್ಟು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಗ್ರಾಮದ ಸೈಯದ್ ನೂರು ಎಂಬಾತ ಕಳೆದ 2 ವರ್ಷಗಳ ಹಿಂದೆ ಮನೆ ಹತ್ತಿರ ಮಾರಾಟ ಮಾಡಲು ಬಂದ ಕೋಳಿ ವ್ಯಾಪಾರಿ ಬಳಿ ಈ ನಾಟಿ ಕೋಳಿಯನ್ನು ಖರೀದಿ ಮಾಡಿದ್ದ. ಈ ಕೋಳಿ ಎರಡು ವರ್ಷಗಳಿಂದಲೂ ಬಿಳಿಯ ಮೊಟ್ಟೆಯನ್ನೇ ಇಡುತ್ತಾ ಬಂದಿತ್ತು. ಕಳೆದ ಎರಡು ದಿನಗಳ ಹಿಂದೆ ಇದೀಗ ನೀಲಿ ಬಣ್ಣದ ಮೊಟ್ಟೆಯನ್ನು ಇಡುವ ಮೂಲಕ ಅಚ್ಚರಿ ಮೂಡಿಸಿದೆ. ಈ ಅಪರೂಪದ ನಾಟಿ ಕೋಳಿ ಮೊಟ್ಟೆ ನೋಡಲು ಸೈಯದ್ ನೂರು ಮನೆಗೆ ಜನ ಆಗಮಿಸುತ್ತಿದ್ದಾರೆ. ಪ್ರತಿನಿತ್ಯ ಬಿಳಿ ಮೊಟ್ಟೆ ಇಡುತ್ತಿದ್ದ ಕೋಳಿ ನೀಲಿ ಮೊಟ್ಟೆ ಇಡುವ ಮೂಲಕ ಆಶ್ಚರ್ಯ ಉಂಟು ಮಾಡಿದೆ.