ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಸ್ವರ್ಣಗೌರಿ ದೇವಾಲಯದಲ್ಲಿ ಹಬ್ಬದ ಸಡಗರ ಜೋರಾಗಿದ್ದು, ಅದ್ಧೂರಿ ಗೌರಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಕುದೇರಿನಲ್ಲಿ ಮಾತ್ರ ಹಬ್ಬ ವಿಭಿನ್ನವಾಗಿ ನಡೆಯುತ್ತದೆ. ಇಲ್ಲಿ ಮನೆಮನೆಗಳಲ್ಲಿ ಹಬ್ಬ ನಡೆಯದೆ ಹೆಣ್ಮಕ್ಕಳು ಒಟ್ಟಾಗಿ ಗೌರಿಯನ್ನು ಪ್ರತಿಷ್ಠಾಪಿಸಿ ಕಂಕಣ ಮತ್ತು ಸಂತಾನ ಭಾಗ್ಯ ಕರುಣಿಸುವಂತೆ ಬೇಡಿಕೊಳ್ಳುವುದು ಕಂಡು ಬರುತ್ತದೆ. ಹೆಣ್ಮಕ್ಕಳು ಬಾಗಿನ ನೀಡಿ ತನಗೂ ತನ್ನ ಸಂಸಾರಕ್ಕೂ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಿ ಪೂಜೆ ಸಲ್ಲಿಸುವುದು ಎಲ್ಲ ಕಡೆಯೂ ನಡೆಯುತ್ತದೆ. ಅದರಲ್ಲೂ ಗೌರಿ ಹಬ್ಬದಲ್ಲಿ ವಿವಾಹವಾಗದ ಯುವತಿಯರು ಕಂಕಣ ಕೂಡಿ ಬರಲೆಂದು ಪ್ರಾರ್ಥನೆ ಸಲ್ಲಿಸಿದರು.