ಒಳ ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯದ ಮುಖಂಡ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು. ಚಿತ್ರದುರ್ಗದಲ್ಲಿ ವೇಷ ಭೂಷಣ ಧರಿಸಿ ವಿನೂತನವಾಗಿ ಅಲೆಮಾರಿ ಸಮುದಾಯದವರು ಪ್ರತಿಭಟನೆ ನಡೆಸಿದರು.ನ್ಯಾ.ನಾಗಮೋಹನ್ ದಾಸ್ ವರದಿಯಂತೆ 1% ಮೀಸಲಾತಿಗೆ ಆಗ್ರಹಿಸಿ, ಅಲೆಮಾರಿ ಒಳಮೀಸಲಾತಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟಿಸಿದರು. ನಾಗಮೋಹನ್ ದಾಸ್ ವರದಿಯಲ್ಲಿ ಪ್ರತ್ಯೇಕ 1% ಮೀಸಲಾತಿ ಜಾರಿಗೆ ಆಗ್ರಹಿಸಿ, ಉರುಮೆ, ಕಿನ್ನ,ಗಂಟೆ ಭಾರಿಸಿ, ಚಾಟಿ ಹೊಡೆದುಕೊಂಡು ಪ್ರತಿಭಟನೆ ಮಾಡಿದರು.