ಹಾವೇರಿ ನಗರಸಭೆ ವ್ಯಾಪ್ತಿಯ ನೀರು ಸರಬರಾಜು ಜಲ ಶುದ್ಧೀಕರಣ ಘಟಕದಲ್ಲಿ ರಿಪೇರಿ ಕಾಮಗಾರಿ ಇರುವುದರಿಂದ ಆಗಸ್ಟ್ 13ರಿಂದ 17ರ ವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ದಿನಗಳಂದು ಒಂದು ವೇಳೆ ಸರಬರಾಜು ಆದರೆ ಅದನ್ನು ಕುಡಿಯಲು ಬಳಕೆ ಮಾಡದೇ ಬಳಸುವುದಕ್ಕೆ ಮಾತ್ರ ಉಪಯೋಗಿಸಬೇಕು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.