ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರಾಗಿ ಹಾಗೂ ಮುಸುಕಿನಜೋಳದ ಬೆಳೆಗೆ ಈಗ ಯೂರಿಯಾ ರಸಗೊಬ್ಬರ ಹಾಕಲು ಸಕಾಲವಾಗಿದೆ. ಆದರೆ ತಾಲ್ಲೂಕಿನಲ್ಲಿ ಟಿ.ಎ.ಪಿ.ಎಂ.ಸಿ.ಎಸ್ ಹೊರತುಪಡಿಸಿ ಬೇರೆ ಯಾವುದೇ ರಸಗೊಬ್ಬರ ಮಾರಾಟಗಾರರ ಬಳಿಯು ಯೂರಿಯಾ ದಾಸ್ತುನು ಇಲ್ಲ. ಹಾಗಾಗಿ ರೈತರು ಟಿ.ಎ.ಪಿ.ಎಂ.ಸಿ.ಎಸ್ ಬಳಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಒಬ್ಬ ರೈತರಿಗೆ ಒಂದು ಚೀಲ ಮಾತ್ರ ನೀಡುವಂತೆ ಕೃಷಿ ಇಲಾಖೆ ಸೂಚಿಸಿದೆ.