ಎಐಯುಟಿಯುಸಿ ವತಿಯಿಂದ ಸೆಪ್ಟೆಂಬರ್ 4 ರಂದು ದೆಹಲಿಯಲ್ಲಿ ನಡೆಯಲಿರುವ ಅಖಿಲ ಭಾರತ ಕಾರ್ಮಿಕ ಪ್ರತಿಭಟನೆಯ ಪೋಸ್ಟರ್ ಬಿಡುಗಡೆಯನ್ನು ಧಾರವಾಡ ನಗರದಲ್ಲಿ ಮಾಡಲಾಯಿತು. ಕಾರ್ಮಿಕ ವಿರೋಧಿ ಕಾನೂನು ರದ್ದು ಮಾಡಬೇಕು, ಸಾರ್ವಜನಿಕ ವಲಯ ಹಾಗೂ ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣ ನಿಲ್ಲಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಾರ್ಮಿಕ ಪ್ರತಿಭಟನೆಯ ನಡೆಯಲಿದೆ ಎಂದು ಪೋಸ್ಟರ್ ಬಿಡುಗಡೆ ಮಾಡಿದ ಎಐಯುಟಿಯುಸಿ ಮುಖಂಡರು ಆಗ್ರಹಿಸಿದರು.