ಕೊಪ್ಪಳ ನಗರದಲ್ಲಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಾಪಿಡ್ ಆಕ್ಷನ್ ಫೋರ್ಸ್ (RAF) ಮತ್ತು ಪೊಲೀಸ್ ಮತ್ತು ಅಧಿಕಾರಿ ಸಿಬ್ಬಂದಿಯವರಿಂದ ಬಸ್ ನಿಲ್ದಾಣ, ಹಸನ್ ರೋಡ್, ಗೌರಿ ಅಂಗಳ, ಮಿಟ್ಟಿಕೇರಿ, ಹುಲ್ಲಿಕೇರಿ, ಗಡಿಯಾರ ಕಂಬ, ಶಾರದಾ ಟಾಕೀಸ್, ಮುಖಾಂತರ ಗವಿಮಠದ ವರೆಗೆ ಪಥ ಸಂಚಲನ ನಡೆಸಲಾಯಿತು. ಸೆಪ್ಟೆಂಬರ್ 02 ರಂದು ಮಧ್ಯಾಹ್ನ 2-00 ಗಂಟೆಗೆ ಕೊಪ್ಪಳ ನಗರದಲ್ಲಿನ ನಾಗರಿಕರು ಶಾಂತಿ ಸೌಹಾರ್ದತೆಯಿಂದ ಗಣೇಶ ಮತ್ತು ಈದ್ ಮೀಲಾದ ಹಬ್ಬವನ್ನು ಆಚರಣೆ ಮಾಡಿ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಸಂದೇಶ ಸಾರುವ ಮೂಲಕ ಪಥ ಸಂಚಲನ ನಡೆಯಿತು