ಚಾಲಕನ ನಿಯಂತ್ರಣ ತಪ್ಪಿ ಫ್ಯಾಕ್ಟರಿ ವ್ಯಾನ್ ಪಲ್ಟಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ರಸ್ತೆಯ ಗ್ರೀನ್ ವ್ಯಾಲಿ ಸಮೀಪ ಇಂದು ಸಂಜೆ ಸುಮಾರು 6:45ರಲ್ಲಿ ನಡೆದಿದೆ... ಘಟನೆಯಲ್ಲಿ ವ್ಯಾನಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಫ್ಯಾಕ್ಟರಿ ಕೆಲಸ ಮುಗಿಸಿಕೊಂಡು ಎಂದಿನಂತೆ ತಮ್ಮ ತಮ್ಮ ಊರುಗಳಿಗೆ ತೆರಳಲು ನಿಗದಿಗೊಂಡಿದ್ದ ವ್ಯಾನ್ ನಲ್ಲಿ ಸುಮಾರು 25-30 ಮಹಿಳೆಯರು ಬರುತ್ತಿದ್ದರು. ವ್ಯಾನ್ ಚಾಲಕ ಮದ್ಯಪಾನ ಮಾಡಿದ್ದ ಎನ್ನಲಾಗಿದೆ. ಪಾನಮತ್ತಿನಲ್ಲಿ ಎದ್ವಾತದ್ವಾ ವಾಹನ ಚಲಾಯಿಸಿದ್ದರಿಂದ ಈ ಘಟನೆ ನಡೆದಿ