ನಕಲಿ ಬಂಗಾರ ಅಡಮಾನ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್ ಎ ಮಂಜುನಾಥಗೌಡ ಅವರಿಗೆ ಸೇರಿದ 13.91 ಕೋಟಿ ರೂಪಾಯಿ ಮತದ ಸ್ಥಿರ ಮತ್ತು ಚರ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ಶುಕ್ರವಾರ ಜಾರಿ ನಿರ್ದೇಶನಾಲಯ ಪ್ರಕಟಣೆ ಮೂಲಕ ತಿಳಿಸಿದೆ. ಅಕ್ರಮಣ ವರ್ಗಾವಣೆ ಕಾಯ್ದೆ 2002ರ ಅಡಿಯಲ್ಲಿ ಆರ್.ಎಂ ಮಂಜುನಾಥಗೌಡ ಮತ್ತು ಅವರ ಪತ್ನಿಯ ಹೆಸರಿನಲ್ಲಿರುವ ಆಸ್ತಿಯನ್ನ ತಾತ್ಕಾಲಿಕವಾಗಿ ಜಟ್ಟಿ ಮಾಡಲಾಗಿದೆ. ಸದ್ಯ ಮಂಜುನಾಥ್ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ.